:ST. FRANCIS COLLEGE :

ಬೆಂಗಳೂರಿನ ಹೃದಯಭಾಗವಾದ ಕೋರಮಂಗಲದಲ್ಲಿರುವ ನಮ್ಮ ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ದಿನಾಂಕ 18-11-2021ರ ಗುರುವಾರದಂದು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಖ್ಯಾತಸಾಹಿತಿಗಳು, ವಿಮರ್ಶಕರು ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ನೂತನ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡರು ಭಾಗವಹಿಸಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳು ಹಾಗೂ ಕ್ರೈಸ್ತ ಪಾದ್ರಿಗಳ ಕೊಡುಗೆಗಳನ್ನು ಕೊಂಡಾಡಿದರು. ಅಲ್ಲದೆ ಅನ್ಯ ಮಾತೃಭಾಷಿಕರ ಕನ್ನಡ ಪ್ರೇಮದ ಬಗ್ಗೆ ಶ್ಲಾಘಿಸಿದರು. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹಾಗೂ ಧೀಮಂತಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನಲ್ಲಿ ನಿರ್ದೇಶಕರಾದ ಸನ್ಮಾನ್ಯ ಬ್ರದರ್ .ಆಂತೋನಿರವರು ಕನ್ನಡ ಭಾಷಾಭಿಮಾನವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಗದೀಶ್ ಬಾಬು ಬಿ.ವಿ ರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕಾಲೇಜಿನ ಉಪನಿರ್ದೇಶಕರಾದ ಗೌರವಾನ್ವಿತ ಬ್ರದರ್.ಪೀಟರ್ ರವರು, ಪ್ರಾಚಾರ್ಯರಾದ ಡಾ.ಆರ್.ಎನ್.ಸುಬ್ಬರಾವ್ ರವರು, ಡೀನ್ ರಾದ ಶ್ರೀಮತಿ ಆನಿಜಾನ್ ರವರು, ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕರಾದ ಡಾ. ರಮ್ಯಾ.ಕೆ ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸ್ವಾಗತ ನೃತ್ಯ, ಸ್ವತಂತ್ರ ಶೈಲಿನೃತ್ಯ, ಕೋಲಾಟ, ಕನ್ನಡಾಭಿಮಾನದ ನಾಟಕ, ಕನ್ನಡ ಅಭಿಮಾನದ ಹಾಡು ಜನಪದ ನೃತ್ಯ… ಇತ್ಯಾದಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳು ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ರಂಗುತಂದರು.

ಕಾಲೇಜಿನ ಬೋಧಕ-ಬೋಧಕೇತರ ವೃಂದದವರು ಹಾಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನಿಯರೆಲ್ಲರೂ ಶಿಸ್ತುಬದ್ಧವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು. ಎನ್.ಸಿ.ಸಿ ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಕಾರಣರಾದರು. ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಕನ್ನಡ ವಿಭಾಗ ಹಾಗೂ ಚಿನ್ನುಡಿ ಕನ್ನಡ ಸಂಘದ ವತಿಯಿಂದ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಹಾಗೂ ಗಣ್ಯರಿಂದ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಡಾ.ಆರ್.ಎಂ ಸಂತೋಷ್ ಕುಮಾರ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು, ಶ್ರೀಯುತ ನಾಗರಾಜ.ಎ ರವರು ವಿಜೇತರ ಪಟ್ಟಿಯನ್ನು ಓದಿದರು. ಶ್ರೀಯುತ ಮನೋಜ್.ಎಂ ಅವರು ವಂದನಾರ್ಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅಂತಿಮವಾಯಿತು.

Newspaper Link:
https://epaper.eesanje.com/3294441/eESANJE-Bangalore/EESANJE-Bangalore-(20-11-2021)#page/5

Lazy Loaded Image
Lazy Loaded Image








Join the St. Francis Community

Let’s keep in touch! We'd like to share all of the good news happening here at St. Francis College, so sign up for emails below to hear about the latest news and updates.

© 2021 St. Francis College. All rights Reserved | Designed by INTEGRO